ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಮೂಡಿ ಸಾವಿರ ದಳದಿ
ಕಾಯುತಿರುವೆನು ನಿನ್ನ
ಪ್ರೇಮ ಸಾರದ ಮಧುವ ಸವಿಯರಾಲೆನು ಮುನ್ನ
ಈ ಅಲೆಯ ಸಂಕೋಲೆ ಕಳಚಿ ಬರಲಾರೆನ
ನಲವಿಂದ ಮೈದೂರಿ ನೀನೊಲಿದು ಬಾರನ್ನ 

ಬಾರ ಚಂದ್ರಮ!
ಹೂಂ ಹೂಂ ಹೂಂ
ಚೆನ್ನಾರ ಚಲುವ ಬಾರ
ಕಣ್ಣಾಸೆ ತುಂಬಿ ತಾರ
ಈ ಮೋದ.. ವಿನೊದ.. ಮನಕಾಮೋದ

ಬಾರೆ ಓ ಸುಮ!
ಹೂಂ ಹೂಂ ಹೂಂ
ಕಣ್ಣಾರೆ ಕಂಡೆ ಭಾಮ
ನಿನ್ನಂಗ ರಂಗ ಸೀಮ
ಈ ಮೋದ.. ವಿನೊದ.. ಮನಕಾಮೋದ

ಬಾರ ಚಂದ್ರಮ!

ನಾನೆನು ಬಲ್ಲೆ
ಮರೆಯಾದ ಮೇಲೆ
ತೊರೆಯುವೆ ನೀ ಅನುರಾಗವ

ತಾರೆರು ನನ್ನ
ಚೆಲುವೆರು ಮುನ್ನ
ನೀ ನೀಡು ಆ ಸುರ ಭೋಗವ
ಮುನಿಸೇನು ಮೋಹಿಣಿ
ಕುಣಿದಾಡು ಕಾಮಿಣಿ
ಈ ಮೋದ.. ವಿನೊದ.. ಮನಕಾಮೋದ
ಬಾರೆ ಓ ಸುಮ!

ಮನರಾಣಿ ನೀನೆ
ಅನುವಾಗು ಜಾಣೆ
ಸಾಕಿನ್ನು ಈ ಬಿಗುಮಾನವು
ಓ ಓ ಓ ಬರಲಾರೆ ನಾನು
ಬಳಿಸಾರು ನೀನು
ಈ ಬಂದನ ಅನುಗಾಲವು
ಮುದ ಮೋಹ ತಾಳುವ
ಸುರ ಲೀಲೆಯಾಡುವ
ಈ ಮೋದ.. ವಿನೊದ.. ಮನಕಾಮೋದ
ಬಾರ ಚಂದ್ರಮ!
ಹೂಂ ಹೂಂ ಹೂಂ
ಚೆನ್ನಾರ ಚಲುವ ಬಾರ
ಕಣ್ಣಾಸೆ ತುಂಬಿ ತಾರ
ಈ ಮೋದ.. ವಿನೊದ.. ಮನಕಾಮೋದ
ಬಾರ ಚಂದ್ರಮ!

ಬಾರೆ ಓ ಸುಮ!

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ